ರಾಜ್ಯ ಸರ್ಕಾರದಿಂದ ಧನ ಸಹಾಯಗಳು

 

ಕರ್ನಾಟಕದ ಮೂಲ ನಿವಾಸಿ ಮಾಜಿ ಸೈನಿಕರ ಒಬ್ಬ ಹೆಣ್ಣು ಮಗಳ ಮದುವೆಗೆ ರೂ. 5000/- ಮದುವೆ ಅನುದಾನ

ಕನ್ನಡಕ ಅನುದಾನ ರೂ. 600/- ಮಾಜಿ ಸೈನಿಕರ ( ವಾರ್ಷಿಕ ವರಮಾನ ರೂ. 1,50,000/-ಗಳಿಗೆ ಮೀರಬಾರದು )

ಮೃತ ಮಾಜಿಸೈನಿಕರ ಕುಟುಂಬಕ್ಕೆ ರೂ. 4000/- ಗಳ ಮರಣ ಪರಿಹಾರ ಧನ ಸಹಾಯ ಪಿಂಚಣಿ ರಹಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಮಾಜಿ ಸೈನಿಕರಿಗೆ ಹಾಗೂ ಅವರ ಅವಲಂಬಿತರಿಗೆ ವಾರ್ಷಿಕ ಪರಿಹಾರದ ರೂಪದಲ್ಲಿ ರೂ. 4000/-ಅನುದಾನ.

ಕರ್ನಾಟಕದ ಮೂಲ ನಿವಾಸಿ ಸೈನಿಕರು ಪ್ರಪಂಚದ ಎರಡನೇ ಮಹಾ ಯುದ್ದದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಿಂಚಣಿ ಇಲ್ಲದೇ ಸೈನ್ಯ ಕಡಿತ ಗೊಳಿಸಿದ ಕಾರಣ ಬಿಡುಗಡೆಯಾಗಿ ಬಂದವರಿಗೆ ರೂ. 6000/- ಪ್ರತಿ ಮಾಹೆಗೌರವ ಧನ.

ಆರ್ಥಿಕ ಮುಗ್ಗಟ್ಟಿನಲ್ಲಿರುವ ಮಾಜಿ ಸೈನಿಕರಿಗೆ/ಅವರ ಅವಲಂಬಿತರಿಗೆ ತುರ್ತು ಧನ ಸಹಾಯ.


ರಕ್ಷಣಾ ಮಂತ್ರಾಲಯ, ಕೇಂದ್ರಿಯ ಸೈನಿಕ ಮಂಡಳಿಯಿಂದ ಲಭ್ಯವಿರುವ ಧನ ಸಹಾಯಗಳು :

 

1. ಮದುವೆ ಅನುದಾನ :- ಹವಾಲ್ದಾರ ಹುದ್ದೆಯ ವರೆಗಿನ ಮಾಜಿ ಸೈನಿಕರ ಇಬ್ಬರು ಹೆಣ್ಣು ಮಕ್ಕಳಿಗೆ ತಲಾ ರೂ 50,000/- ರಂತೆ ಮದುವೆಯ ಅನುದಾನ

2. ಮರಣ ಪರಿಹಾರ ಧನ ಸಹಾಯ :- ಹವಾಲ್ದಾರ ಹುದ್ದೆಯವರೆಗೆ ಇರುವಮಾಜಿ ಸೈನಿಕರ ವಿಧವಾ ಪತ್ನಿಯವರಿಗೆ ರೂ 5000/- ಮರಣ ಪರಿಹಾರ ಧನ ಸಹಾಯ

3. ವೈದ್ಯಕೀಯ ಧನ ಸಹಾಯ:- ಹವಾಲ್ದಾರ ಹುದ್ದೆಯ ವರೆಗೆ ಇರುವ ಪಿಂಚಣಿ ರಹಿತ ಮತ್ತು ಇ ಸಿ ಹೆಚ್ ಎಸ್ ಕಾರ್ಡರಹಿತ ಮಾಜಿ ಸೈನಿಕರಿಗೆ ಹಾಗೂ ಅವರ ಅವಲಂಬಿತರಿಗೆ ರೂ 30,000/- ವೈದ್ಯಕೀಯ ಧನ ಸಹಾಯ

4. ಅನಾಥ ಮಕ್ಕಳ ಧನ ಸಹಾಯ:- ಮಾಜಿ ಸೈನಿಕರ ಹಾಗೂ ಅಧಿಕಾರಿಗಳು ಹೆಣ್ಣು ಮಕ್ಕಳಿಗೆ ಮದುವೆಯಕ್ಕಿಂತ ಮೊದಲು ಮತ್ತು 21 ವರ್ಷದೊಳಗಿನ ಗಂಡು ಮಕ್ಕಳಿಗೆ ಧನ ಸಹಾಯ ನೀಡಲಾಗುತ್ತದೆ.

5. ಶಿಕ್ಷಣ ಧನ ಸಹಾಯ :-ಹವಾಲ್ದಾರ ಹುದ್ದೆಯ ವರೆಗಿನ ಮಾಜಿ ಸೈನಿಕರ ಇಬ್ಬರು ಗಂಡುಮಕ್ಕಳಿಗೆ ಪೌಢ ಶಿಕ್ಷಣ ಪಡೆಯುವವರೆಗೆ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಪದವಿ ಶಿಕ್ಷಣ ಪಡೆಯುವವರೆಗೆ ಪ್ರತಿ ತಿಂಗಳೂ ತಲಾ 1000/- ರಂತೆ ಧನ ಸಹಾಯ

6. ವಯೋವೃದ್ಧ ಧನ ಸಹಾಯ :- ರಾಜ್ಯ/ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ/ಪಿಂಚಣಿ ರಹಿತ 65 ವರ್ಷ ಮೇಲ್ಪಟ್ಟ ಮಾಜಿ ಸೈನಿಕರು ಹಾಗೂ ವಿಧವಾ ಪತ್ನಿಯರಿಗೆ ರೂ 4000/- ರಂತೆ ಜೀವನ ಪರ್ಯಂತ ಪ್ರತಿ ತಿಂಗಳು

7. ಪ್ರತಿ ಶತ 100 ರಷ್ಟು ಅಂಗವಿಕಲತೆ ಹೊಂದಿರುವ ಮಾಜಿ ಸೈನಿಕರ ಮಕ್ಕಳಿಗೆ ಪ್ರತಿ ತಿಂಗಳೂ ತಲಾ 1000/- ರಂತೆ ಅಂಗವಿಕಲತೆಯ ಧನ ಸಹಾಯ ನೀಡಲಾಗುತ್ತದೆ.

8. ಅಧಿಕಾರಿಗಳ ತರಬೇತಿ ಅನುದಾನ :- ಹವಾಲ್ದಾರ ಹುದ್ದೆಯವರೆಗಿನ ಮಾಜಿ ಸೈನಿಕರ ಮಕ್ಕಳು ಅಧಿಕಾರಿ ವರ್ಗದ ತರಬೇತಿಗೆ ನೇಮಕಾತಿಹೊಂದಿ ರಕ್ಷಣಾ ಪಡೆಯ ರಾಷ್ಟ್ರೀಯ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದರೆ ರೂ 1000/- ರಂತೆ ಪ್ರತಿ ತಿಂಗಳೂಈ ಧನ ಸಹಾಯ ನೀಡಲಾಗುತ್ತದೆ.

9. ಮನೆಯ ದುರಸ್ತಿ ಅನುದಾನ :- ಹವಾಲ್ದಾರ ಹುದ್ದೆಯವರೆಗಿನ ಮಾಜಿ ಸೈನಿಕರು/ವಿಧವಾ ಪತ್ನಿಯರು ಮತ್ತು ಅಂಗವಿಕಲತೆ ಹೊಂದಿದ ಹೆಣ್ಣು ಮಕ್ಕಳ ಮನೆಯ ದುರಸ್ತಿಗಾಗಿ ರೂ 20,000/- ಅನುದಾನ ಮಂಜೂರು ಮಾಡಲಾಗುತ್ತದೆ. ಅನುದಾನ ಮಂಜೂರು ಮಾಡುವಪೂರ್ವದಲ್ಲಿ ಸಂಬಂಧಿಸಿದ ಕಂದಾಯ ಇಲಾಖೆಯಿಂದ ಕೈಗೊಳ್ಳುವ ದುರಸ್ತಿಯ ಕುರಿತು ಅಂದಾಜು ಪಟ್ಟಯನ್ನು ಸಲ್ಲಿಸತಕ್ಕದ್ದು.

10. ವಿಧವಾ ಪತ್ನಿಯ ಮದುವೆಯ ಅನುದಾನ : _ ಹವಾಲ್ದಾರ ಹುದ್ದಯವರೆಗಿನ ಪಿಂಚಣಿ ಇರುವ ಹಾಗೂ ಪಿಂಚಣಿ ರಹಿತ ಮಾಜಿ ಸೈನಿಕರ ವಿಧವಾ ಪತ್ನಿಯರಿಗೆ ರೂ 16,000/- ಮದುವೆಯ ಅನುದಾನ

11. ವಿಧವೆಯರಿಗೆ ವೃತ್ತಿ ತರಬೇತಿ ಅನುದಾನ :- ಹವಾಲ್ದಾರ ಹುದ್ದೆಯ ವರೆಗಿನ ಪಿಂಚಣಿ ಇರುವ ಹಾಗೂ ಪಿಂಚಣಿ ರಹಿತ ಮಾಜಿ ಸೈನಿಕರ ವಿಧವಾ ಪತ್ನಿಯರಿಗೆ ರೂ 20,000/- ವೃತ್ತಿ ತರಬೇತಿ ಅನುದಾನ

 

ರಕ್ಷಣಾ ಪಡೆಯ ಸೈನಿಕರ ಪತ್ನಿಯರ ಕಲ್ಯಾಣ ಸಂಸ್ಥೆಯಿಂದ ಧನ ಸಹಾಯ

 

1. ಪ್ರಕೃತಿ ವಿಕೋಪದಿಂದ ತೊಂದರೆಗೀಡಾದ ಹೊಂದಿದ ಮಾಜಿ ಸೈನಿಕರು ಹಾಗೂ ವಿಧವಾ ಪತ್ನಿಯರಿಗೆ ಸಂಸ್ಥೆಯ ವತಿಯಿಂದ ಧನ ಸಹಾಯ ಮಂಜೂರು ಮಾಡಲಾಗುತ್ತದೆ.

2. ಸಂಸ್ಥೆಯ ಅಧ್ಯಕ್ಷರಿಂದ ಶಿಫಾರಸ್ಸು ಮಾಡಿರುವ ಮಾಜಿ ಸೈನಿಕರ ವಿಧವಾ ಪತ್ನಿಯರಿಗೆ ಜೀವನದಲ್ಲಿ ಒಂದು ಸಲ ಧನ ಸಹಾಯ ಮಂಜೂರು ಮಾಡಲಾಗುತ್ತದೆ. ಆದರೆ ಅಂತಹ ಧನ ಸಹಾಯ ಪಡೆಯಲು ಯಾವಿದೆ ಸಂಸ್ಥೆಯಿಂದ ಧನ ಸಹಾಯ ಪಡೆದಿರಬಾರದು.

3. ಮದುವೆಯ ಅನುದಾನ :- ಆರ್ಥಿಕ ತೊಂದರೆಯಲ್ಲಿರುವ ಮಾಜಿ ಸೈನಿಕರ ವಿಧವಾ ಪತ್ನಿ / ಅವಲಂಬಿತರು / ಅನಾಥ ಮಕ್ಕಳಿಗೆ ಮದುವೆ ಧನ ಸಹಾಯ ಮಂಜೂರು ಮಾಡಲಾಗುತ್ತದೆ.

Go to top