ರಾಜ್ಯ ಸರ್ಕಾರದಿಂದ

1. ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನ ಹಂಚಿಕೆಯಲ್ಲಿ ಮಾಜಿ ಸೈನಿಕರಿಗೆ 10% ಮೀಸಲಾತಿ

2. ಆಶ್ರಯ ಯೋಜನೆಯಡಿ ಮನೆ ಹಂಚಿಕೆಯಲ್ಲಿ ಆದಾಯದ ಮಿತಿಯಿಲ್ಲದೆ 1% ಮೀಸಲಾತಿ

3. ಕರ್ನಾಟಕದ ಮೂಲನಿವಾಸಿ ಮಾಜಿಸೈನಿಕರ ಮಕ್ಕಳಿಗೆ ಈ ಕೆಳಗಿನಂತೆ ವಿದ್ಯಾಭ್ಯಾಸದಲ್ಲಿಸೌಲಭ್ಯಗಳು :

ಅ) ಪಾಲಿಟೆಕ್ನಿಕ್ ವಿದ್ಯಾಭ್ಯಾಸಗಳಲ್ಲಿ 2.5% ಮೀಸಲಾತಿ

ಬ) ಡಿ.ಎಡ್. ವಿದ್ಯಾಭ್ಯಾಸಗಳಲ್ಲಿ 20 ಸೀಟುಗಳ ಮೀಸಲಾತಿ

ಕ) ಬಿ.ಎಡ್. ವಿದ್ಯಾಭ್ಯಾಸಗಳಲ್ಲಿ 15 ಸೀಟುಗಳ ಮೀಸಲಾತಿ

ಡ) ತಾಂತ್ರಿಕ ( ಎಂಜಿನಿಯರಿಂಗ್ ) ವಿದ್ಯಾಭ್ಯಾಸಗಳಲ್ಲಿ 50 ಸೀಟುಗಳ ಮೀಸಲಾತಿ

ಇ) ಮೆಡಿಕಲ್ ವಿದ್ಯಾಭ್ಯಾಸಗಳಲ್ಲಿ 06 ಸೀಟುಗಳ ಮೀಸಲಾತಿ

ಫ) ದಂತವೈದ್ಯಕೀಯ ವಿದ್ಯಾಭ್ಯಾಸಗಳಲ್ಲಿ 6 ಸೀಟುಗಳ ಮೀಸಲಾತಿ

ಗ) ಕೃಷಿ ವಿಶ್ವವಿದ್ಯಾನಿಲಯಗಳ ವಿದ್ಯಾಭ್ಯಾಸಗಳಲ್ಲಿ 2.5% ಮೀಸಲಾತಿ

4. ರಾಜ್ಯ ಸರ್ಕಾರದ ಎ, ಬಿ, ಸಿ, ಡಿ ಗುಂಪುಗಳ ಹುದ್ದೆಗಳಲ್ಲಿ 10% ಮೀಸಲಾತಿ ಮತ್ತು ವಯೋಮಿತಿ ಸಡಿಲಿಕೆ

5. ರಾಜ್ಯ ಸರ್ಕಾರದ ನಿಯಮಗಳನುಸಾರ ವೇತನ ನಿಗದಿ, ಪಿಂಚಣಿಗಾಗಿ ಸೇವಾ ಸೇರ್ಪಡೆ

6. ಈ ಕೆಳಕಂಡ ಸ್ಥಳಗಳಲ್ಲಿ ಸೈನಿಕ ವಿಶ್ರಾಂತಿ ಗೃಹಗಳ ಸೌಲಭ್ಯ :

* ಬೆಂಗಳೂರು * ಬೆಳಗಾವಿ * ಬಿಜಾಪುರ * ಧಾರವಾಡ * ಕಾರವಾರ

* ಮಡಿಕೇರಿ * ಮೈಸೂರು * ಮಂಗಳೂರು * ಅಥಣಿ * ಶಿವಮೊಗ್ಗ

7. ಈ ಕೆಳಕಂಡ ಸ್ಥಳಗಳಲ್ಲಿ ಉಚಿತ ಮಿಲಿಟರಿ ಬಾಲಕರ ವಿದ್ಯಾರ್ಥಿನಿಲಯಗಳು :

* ಬೆಳಗಾವಿ * ಅಥಣಿ *ಕಾರವಾರ * ಬಿಜಾಪುರ

8. ಧಾರವಾಡದಲ್ಲಿ ಉಚಿತ ಮಿಲಿಟರಿ ಬಾಲಕಿಯರ ವಿದ್ಯಾರ್ಥಿನಿಲಯ

9. ಪಿಂಚಣಿರಹಿತ ಮಾಜಿಸೈನಿಕರು / ಅವಲಂಬಿತರಿಗೆ ತೀವ್ರ ಕಾಯಿಲೆಗಳಿಗೆ ಆರ್ಥಿಕ ಧನಸಹಾಯ ( ರೂ. 10000 ಗಳ ಮಿತಿಗೊಳಪಟ್ಟು )

 

ಕೇಂದ್ರ ಸರ್ಕಾರದಿಂದ


1. ಕೇಂದ್ರ ಸರ್ಕಾರದ ಬಿ, ಸಿ, ಡಿ ಗುಂಪುಗಳ ಹುದ್ದೆಗಳಲ್ಲಿ 10% ಮೀಸಲಾತಿ ಮತ್ತು ವಯೋಮಿತಿ ಸಡಿಲಿಕೆ

2. ನಮ್ಮ ಇಲಾಖೆಯ ಮೂಲಕ ಉಚಿತ ವೃತ್ತಿಪರ ತರಬೇತಿ

Go to top