ಈ ಇಲಾಖೆಯು ಅಥಣಿ , ಬೆಳಗಾವಿ, ಬಿಜಾಪೂರ, ಕಾರವಾರ ಮತ್ತು ಮೈಸೂರು ನಗರಗಳಲ್ಲಿ ಮಾಜಿ ಸೈನಿಕರ ಗಂಡು ಮಕ್ಕಳಿಗಾಗಿ ಮತ್ತು ಧಾರವಾಡ ನಗರದಲ್ಲಿ ಹೆಣ್ಣುಮಕ್ಕಳಿಗಾಗಿ ವಸತಿ ನಿಲಯಗಳನ್ನು ನಿರ್ವಹಿಸುತ್ತಿದೆ. ಈ ವಸತಿನಿಲಯದಲ್ಲಿ ಕರ್ನಾಟಕದ ಮೂಲ ನಿವಾಸಿ ಮಾಜಿ ಸೈನಿಕರ ಮಕ್ಕಳಿಗೆ ಕೋರಿಕೆಯನುಸಾರವಾಗಿ ಪ್ರವೇಶ ಕಲ್ಪಿಸಲಾಗುತ್ತಿದೆ. ಈ ಸೌಲಭ್ಯವನ್ನು ನಗರ ಪ್ರದೇಶದಲ್ಲಿ ಒಳ್ಳೆಯ ಶಿಕ್ಷಣ ನೀಡುವ ಉದ್ದೇಶದಿಂದ ನಿರ್ವಹಿಸಲಾಗುತ್ತಿದೆ.ವಸತಿ ನಿಲಯಗಳಲ್ಲಿ ಪ್ರವೇಶ ಪಡೆಯಲು ಇಚ್ಛೆಯುಳ್ಳ ಮಾಜಿ ಸೈನಿಕರು/ಮೃತ ಮಾಜಿ ಸೈನಿಕರ ಪತ್ನಿಯರು ಸಾಮಾನ್ಯವಾಗಿ ಮಾರ್ಚ್/ಎಪ್ರಿಲ ತಿಂಗಳಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.

ಪ್ರವೇಶ ಪಡೆಯಲು ಸಾಮಾನ್ಯ ನಿಯಮಗಳು -

(ಅ) ಮಾಜಿ ಸೈನಿಕರು ಮೂಲತಃ ಕರ್ನಾಟಕದವರಾಗಿರಬೇಕು.

(ಆ) ಒಬ್ಬ ಮಕ್ಕಳಿಗೆ ಮಾತ್ರ ಉಚಿತ ಪ್ರವೇಶ ಪ್ರಾವಧಾನ ವಿರುತ್ತದೆ. ಕೆಲವೊಂದು ವಿಷೇಷ ಸಹಾನುಭೂತಿ ಸಂದರ್ಭದಲ್ಲಿ ಎರಡನೇ ಮಗುವಿಗೆ ಪಾವತಿ ಆಧಾರದ ಮೇರೆಗೆ  ಪ್ರವೇಶ ನೀಡಲಾಗುತ್ತಿದೆ.

(ಇ) ನಿಲಯ ಇರುವ ನಗರ ಪಟ್ಟಣಗಳಲ್ಲಿ ವಿದ್ಯಾರ್ಥಿಗಳು ತಮ್ಮ ಇಚ್ಛೆಗನುಸಾರವಾಗಿ ಯಾವದೇ ಶಾಲಾ/ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ.

(ಈ )ಪ್ರವೇಶ ಬಯಸುವ ಮಕ್ಕಳ ಪಾಲಕರ ವಾಸಸ್ಥಳ ನಿಲಯದಿಂದ ಕನಿಷ್ಠ 30 ಕಿ.ಮಿ ಅಂತರದಲ್ಲಿರಬೇಕು.

(ಉ) ಈ ನಿಲಯಗಳಲ್ಲಿ 5 ನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. ಒಂದು ವೇಳೆ ಸ್ಥಳಗಳು ಖಾಲಿ ಇದ್ದಲ್ಲಿ ಪಿಯುಸಿ, ಪಾಲಿಟೆಕ್ನಿಕ ಮತ್ತು ಆಯಟಿಆಯ್ ಗಳಲ್ಲಿ ವ್ಯಸಾಂಗ ಮಾಡುತ್ತಿರುವ ಮಕ್ಕಳಿಗೆ ಷರತ್ತುಗಳೊಂದಿಗೆ ಪ್ರವೇಶ ನೀಡಲಾಗುತ್ತಿದೆ.

(ಊ) ಪ್ರವೇಶ ಪಡೆದ ಮಕ್ಕಳು ಅನುತ್ತೀರ್ಣರಾದಲ್ಲಿ ಮತ್ತೆ ಪ್ರವೇಶ ನೀಡುವುದಿಲ್ಲ.

ನಿಲಯಾರ್ಥಿಗಳಿಗೆ ನೀಡುತ್ತಿರುವ ಸೌಲಭ್ಯಗಳು:-

(ಅ) ವರ್ಷಕ್ಕೆ ಒಂದು ಜೊತೆ ಸಮವಸ್ತ್ರ.

(ಆ) ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ.

(ಇ) ಒಳ ಕ್ರೀಡೆಗಳು - ಕೇರಮ, ಚೆಸ್ಸ್ ಮತ್ತು ಹೊರ ಕ್ರೀಡೆಗಳು ವ್ಹಾಲಿಬಾಲ್, ಥ್ರೋಬಾಲ್ ಇತ್ಯಾದಿ.

(ಈ)ಚಿಕ್ಕ ಗ್ರಂಥಾಲಯ.

(ಉ)ಟೆಲಿವ್ಹಿಜನ್ ಕೊಟಡಿ.

Go to top