ರಾಜ್ಯ ಸರ್ಕಾರದಿಂದ ಲಭ್ಯವಿರುವ ಸವಲತ್ತುಗಳನ್ನು ಪಡೆಯಲು ಸಲ್ಲಿಸಬೇಕಾದ ದಾಖಲೆಗಳ ವಿವರ

  SL. NO. PARTICULARS   DOCUMENT REQUIRED DETAILS
   Note  :  All the documents are required in original with one set of Xerox copies
01.

ಗಣತಿ ಗುರುತಿನ ಚೀಟಿ ಮತ್ತು ಉದ್ಯೋಗ ನೊಂದಣಿ :-

(ಅ)ಸೈನ್ಯ ಸೇವಾ ಬಿಡುಗಡೆ ಪ್ರಮಾಣ ಪತ್ರದ ಮೂಲ ಪ್ರತಿ.

(ಆ)ಪಿಂಚಣಿಯ ಪೇಮಂಟ್ ಆದೇಶದ ಮೂಲ ಪ್ರತಿ.

(ಇ)ಸ್ಟ್ಯಾಂಪ ಗಾತ್ರದ ನಾಲ್ಕು ಭಾವಚಿತ್ರಗಳು.

02.

ಮರಣ ಪರಿಹಾರ ಧನ ಸಹಾಯ :-

(ಅ)ಗಣತಿ ಗುರುತಿನ ಚೀಟಿ.

(ಆ)ಸೈನ್ಯ ಸೇವಾ ಬಿಡುಗಡೆ ಪ್ರಮಾಣ ಪತ್ರದ ಮೂಲ ಪ್ರತಿ.

(ಇ)ಪಿಂಚಣಿಯ ಪೇಮಂಟ್ ಆದೇಶದ ಮೂಲ ಪ್ರತಿ.

(ಈ)ಮೃತ ಮಾಜಿ ಸೈನಿಕರ ಮರಣ ಪ್ರಮಾಣ ಪತ್ರ.

03.  

ಮದುವೆ ಅನುದಾನ :-

(ಅ)ವಿವಾಹ ನೊಂದಣೆ ಪ್ರಮಾಣ ಪತ್ರ.

(ಆ)ವಿವಾಹವಾದ ಮಗಳ ಶಾಲಾ ವರ್ಗಾವಣೆ/ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ.

(ಇ)ಮಾಜಿ ಸೈನಿಕರ ಶಾಲಾ ವರ್ಗಾವಣಿ ಪತ್ರ.

(ಈ)ಸೈನ್ಯೆ ಸೇವಾ ಬಿಡುಗಡೆ ಪ್ರಮಾಣ ಪತ್ರದ ಮೂಲ ಪ್ರತಿ.

(ಉ)ಬ್ಯಾಂಕ್ ಪಾಸ ಪುಸ್ತಕದ ನೆರಳಚ್ಚು ಪ್ರತಿ.

04.  

ಕನ್ನಡಕ ಅನುದಾನ :-

(ಅ)ವೈದ್ಯರು ಕಣ್ಣು ತಪಾಸಣೆ ಮಾಡಿದ ಚೀಟಿ.

(ಆ)ಕನ್ನಡಕ ಖರೀದಿಸಿದ ಬಿಲ್ಲು, ಬಿಲ್ಲಿನಲ್ಲಿ ಕಡ್ಡಾಯವಾಗಿ ಟಿನ್ ಸಂಖ್ಯೆ ಮತ್ತು ಬಿಲ್ಲಿನ ಹಿಂಭಾಗದಲ್ಲಿ ಪರೀಕ್ಷಿಸಿದ ವೈದ್ಯರ ಮೊಹರು ಮತ್ತು ಸಹಿ ಮಾಡಿರಬೇಕು.

(ಇ)ಸೈನ್ಯೆ ಸೇವಾ ಬಿಡುಗಡೆ ಪ್ರಮಾಣ ಪತ್ರದ ಮೂಲ ಪ್ರತಿ.

05.  

ವಾರ್ಷಿಕ ಪರಿಹಾರ ಧನ ಸಹಾಯ :-

(ಅ)ಮಾಜಿ ಸೈನಿಕರ/ಮೃತ ಮಾಜಿ ಸೈನಿಕರ ಪತ್ನಿಯರ ಗಣತಿ ಗುರುತಿನ ಚೀಟಿ.

(ಆ)ಸೈನ್ಯ ಸೇವಾ ಬಿಡುಗಡೆ ಪ್ರಮಾಣ ಪತ್ರದ ಮೂಲ ಪ್ರತಿ.

(ಇ)ವಾರ್ಷಿಕ ಆದಾಯ ಪ್ರಮಾಣ ಪತ್ರ.

06.  

ಪ್ರಕೃತಿ ವಿಕೋಪಕ್ಕೆ ಹಾನಿಯಾದ ಮನೆ ದುರಸ್ತಿ ಅನುದಾನ :-

(ಅ)ಸೈನ್ಯ ಸೇವಾ ಬಿಡುಗಡೆ ಪ್ರಮಾಣ ಪತ್ರದ ಮೂಲ ಪ್ರತಿ.

(ಆ)ಗಣತಿ ಗುರುತಿನ ಚೀಟಿ.

(ಇ)ಮನೆ ಹಾನಿಗೊಳಗಾದ ಕುರಿತು ಸಂಬಂಧಪಟ್ಟ ತಾಲೂಕಾ ತಹಶೀಲ್ದಾರರಿಂದ ಪ್ರಮಾಣ ಪತ್ರ.

(ಈ)ಪ್ರಕೃತಿ ವಿಕೋಪ ಕುರಿತು ಸರ್ಕಾರಿ ಆದೇಶ.

07.  

ಪಿಂಚಣಿ ರಹಿತ ಮಾಜಿ ಸೈನಿಕರು/ಅವರ ಪತ್ನಿಯರಿಗೆ ವೈದೈಕೀಯ ವೆಚ್ಚದ ಅನುದಾನ :-

(ಅ)ಗಣತಿ ಗುರುತಿನ ಚೀಟಿ.

(ಆ)ಸೈನ್ಯ ಸೇವಾ ಬಿಡುಗಡೆ ಪ್ರಮಾಣ ಪತ್ರದ ಮೂಲ ಪ್ರತಿ.

(ಇ)ವೈದೈಕೀಯ ವೆಚ್ಚದ ಬಿಲ್ಲುಗಳ ಮೂಲ ಪ್ರತಿ ಹಾಗೂ ಬಿಲ್ಲುಗಳ ಹಿಂಬಾಗದಲ್ಲಿ ವ್ಯದ್ಯರ ಮೊಹರು ಮತ್ತು ಸಹಿ.

 

Go to top